Select Your Language

Notifications

webdunia
webdunia
webdunia
webdunia

ಬಿಸಿಲಿನ ತಾಪಮಾನ ಹೆಚ್ಚಳ: ಸೂರ್ಯನ ವಿರುದ್ಧವೇ ದೂರು ದಾಖಲಿಸಿದ ವಕೀಲ ಮಹಾಶಯ

ಬಿಸಿಲಿನ ತಾಪಮಾನ ಹೆಚ್ಚಳ: ಸೂರ್ಯನ ವಿರುದ್ಧವೇ ದೂರು ದಾಖಲಿಸಿದ ವಕೀಲ ಮಹಾಶಯ
ಇಂದೋರ್ , ಬುಧವಾರ, 25 ಮೇ 2016 (12:50 IST)
ಬೇಸಿಗೆಯ ಬಿಸಿಲಿನ ತಾಪದಿಂದ ಬೇಸತ್ತ  ಶಾಜಾಪುರ್ ಮೂಲದ ವ್ಯಕ್ತಿಯೊಬ್ಬ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸೂರ್ಯ ದೇವನ ವಿರುದ್ಧ ದೂರು ದಾಖಲಿಸಿದ ವಿಚಿತ್ರ ಘಟನೆ ವರದಿಯಾಗಿದೆ. 
 
ವೃತ್ತಿಯಲ್ಲಿ ವಕೀಲರಾದ ಶಿವಪಾಲ್ ಸಿಂಗ್ ಯಾದವ್, ಬೇಸಿಗೆಯ ಬಿಸಿಲಿನ ತಾಪ ತಾಳಲಾರದ ಸ್ಥಿತಿಯನ್ನು ತಲುಪಿದ್ದು ಸೂರ್ಯನಿಗೆ ತಕ್ಕ ಪಾಠ ಕಲಿಸಲು ಸೆಕ್ಷನ್ 154ರ ಅಡಿಯಲ್ಲಿ ಸೂರ್ಯನ ವಿರುದ್ಧ ಕೇಸ್ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
 
ಶಿವಪಾಲ್ ಸಿಂಗ್ ಯಾದವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ವರಿಗೆ ನೀಡಿದ ದೂರಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ತಾಪದಿಂದಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಮತ್ತು ಗಿಡಮರಗಳು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿವೆ ಎಂದು ಆರೋಪಿಸಿದ್ದಾರೆ. 
 
ದೂರಿನ ಬಗ್ಗೆ ಸುದ್ದಿಗಾರರು ಕೋತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ರಾಜೇಂದ್ರ ವರ್ಮಾ ಅವರನ್ನು ಸಂಪರ್ಕಿಸಿದಾಗ, ಕಳೆದ ಮೇ 20 ರಂದು ಸೂರ್ಯನ ಬಿಸಿಲಿನ ತಾಪದ ಹೆಚ್ಚಳ ಕುರಿತಂತೆ ದೂರು ದಾಖಲಾಗಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 
 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಸ್ತ್ರಾಸ್ತ್ರ ತರಬೇತಿ ಶಿಬಿರ: ಬಜರಂಗದಳ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು